ಅಪ್ರಿಕಾಟ್ ಎಣ್ಣೆಯನ್ನು ಅಪ್ರಿಕಾಟ್ ಬೀಜದಿಂದ ತೆಗೆಯಲಾಗುತ್ತದೆ. ಅಪ್ರಿಕಾಟ್ ಮರ ರೋಜೇಸೆಕುಟುಂಬಕ್ಕೆ ಸೇರಿದ ಮರ. (). ಇದರ ಜಾತಿ ಮತ್ತು ಉಪಜಾತಿ ಪ್ರುನಸ್ಆಗಿದೆ. ಈ ಮರದ ಸಸ್ಯಶಾಸ್ತ್ರ ಹೆಸರುಪ್ರುನಸ್ ಅರ್ಮೆನಿಯಕ( ). ಅಪ್ರಿಕಾಟ್ ಜೊತೆ ಅತಿಪುರಾತನ ಕಾಲದಿಂದ(ಸಾವಿರಾರು ವರ್ಷದಿಂದ) ಮನುಜನಿಗೆ ಪರಿಚಯವಿದೆ. ಇದರ ಮೂಲಸ್ಥಾನ ಏಷಿಯಾದಲ್ಲಿರುವ ಅರ್ಮೆನಿಯ()ಎಂದು ಭಾವಿಸಲಾಗುತ್ತದೆ. ಅದರಿಂದನೆ ಇದರ ಸಸ್ಯಶಾಸ್ತ್ರಹೆಸರನ್ನು ಪ್ರುನಸ್ ಅರ್ಮೆನಿಯಕ ಎಂದು ಕರೆಯಲಾಗುತ್ತದೆ. ಕೆಲವರ ಅಭಿಪ್ರಾಯ ಪ್ರಕಾರ ಇದರ ಜನ್ಮಸ್ಥಾನ ರಷ್ಯಾ-ಚೈನಾ ಸರಹದ್ದು ಪ್ರಾಂತ್ಯ, ಅಲ್ಲಿಂದ ಇದುಸಿಲ್ಲ್ಕ್ ರೋಡ್ ದ್ವಾರ ಮಧ್ಯ ತೂರ್ಪು ಯೂರೋಪ್ ದೇಶಗಳಿಗೆ ಕರೆತರಲಾಗಿದೆ. ಕ್ರಿ.ಪೂ ೬೦ ಸಂ. ಪುರಾತನ ಗ್ರೀಸಿನಲ್ಲಿ ಇದರ ಬಗ್ಗೆ ತಿಳಿವಳಿಕೆ ಇದೆ. ಭಾರತ ದೇಶದಲ್ಲಿ ಈ ಮರವನ್ನು ಕ್ರೀ.ಪೂ. ೩೦೦೦ಸಾವಿರ ವರ್ಷಕ್ಕಿಂತ ಮುಂಚಿನಿಂದ ಬೆಳೆಸಲಾಗಿದೆ ಎಂದು ತಿಳಿದು ಬಂದಿದೆ . == ಅಪ್ರಿಕಾಟ್ ಗಿಡ == ಅಪ್ರಿಕಾಟ್ ಎಂಬುವುದು ಆಂಗ್ಲ ಹೆಸರು. ಭಾರತದಲ್ಲಿ ಈ ಮರವನ್ನು ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಿಂದಿ ಭಾಷೆಯಲ್ಲಿ ಛುಲ್ಲು(), ಖುಬಾನಿ(),(ಛೊಲchola)ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಜಲ್ದರು ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೆಲವು ಕಡೆ ಛುಲ್ಲು ಎಂದು ಕರೆಯುತ್ತಾರೆ. ಈ ಮರ ಉತ್ತರ ಭಾರತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಉತ್ತರದ ಶೀತಲ ಉಷ್ಣ ಪ್ರಾಂತ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಬೆಳೆಯುತ್ತಿವೆ. ಈ ಮರ ಸಮುದ್ರ ಮಟ್ಟದಿಂದ ೧೨೦೦-೨೫೦೦ ಮೀಟರುಗಳ ಎತ್ತರವಾದ ಪ್ರಾಂತ್ಯದಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಪ್ರಿಕಾಟ್ ತೋಟೆಗಳ ಸಾಗುವಳಿ ನೈನಿತಾಲ್, ಅಲ್ಮೊರ, ಫಿಥರ್ ಘರ್ಜಿಲ್ಲೆಗಳಲ್ಲಿ ಹೆಚ್ಚು ವಿಸ್ತೀರ್ಣದಲ್ಲಿದೆ. ಅಪ್ರಿಕಾಟ್ ತೋಟೆಗಳ ಬೆಳವಣಿಗೆ ಹಿಮಾಚಲ್ ಪ್ರದೇಶ ,ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳು ಅನುಕೂಲ ಪ್ರಾಂತ್ಯಗಳು . ಮರ ೧೦ ಮೀಟರುಗಳ ಎತ್ತರದವರೆಗೆ ಬೆಳೆಯುತ್ತದೆ. ಕೊಂಬೆಗಳಿರುತ್ತವೆ. ಕಾಂಡದ ಮೇಲೆ ಕೆಂಪು ತೊಗಟೆ ಇರುತ್ತದೆ. ಎಲೆಗಳು ಹಸಿರಾಗಿ ೬ ಸೆಂ.ಮೀ ಉದ್ದ ವಾಗಿರುತ್ತವೆ .ಹೂಗಳುಪಿಂಕು ಬಣ್ಣ ಹೊಂದಿ ಅಂಡಾಕಾರ ರೂಪದಲ್ಲಿ ಇರುತ್ತವೆ. ಏಪ್ರಿಲ್-ಮೇ ತಿಂಗಳಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಗೋಲಾಕಾರವಾಗಿ ೫ ಸೆಂ.ಮೀ. ಅಡ್ಡಿಳಿತ ಪ್ರಮಾಣದಲ್ಲಿ ಇರುತ್ತದೆ. ಕಾಯಿ/ಹಣ್ಣ ಮೇಲೆ ಬೂದು ತರಹ ಪುಡಿ ಇರುತ್ತದೆ. ಹಣ್ಣು ಹಳದಿ ಇಲ್ಲವೆ ಹಳದಿ, ಕೆಂಪು ವರ್ಣಮಿಶ್ರಣವಾಗಿರುತ್ತದೆ. ರುಚಿ ಹುಳಿ, ಸಿಹಿಗಳ ಸಮ್ಮೇಳನವಾಗಿರುತ್ತದೆ. === ವಿತ್ತನ/ಬೀಜ === ವಿತ್ತನ/ಬೀಜ ಪರಿಮಾಣವು 1.3-2.5 0.8-1.2 ಸೆಂ.ಮೀ. ಇದೊಂದು ಗೊರಟೆ(), ಹೊರಗೆ ಮೃದುವಾದ ತಿರುಳು ಇರುತ್ತದೆ. ಮರಕ್ಕೆ ೪-೫ ವರ್ಷ ಬಂದಾಗ ಹೂವನ್ನು ಬಿಡುವುದಕ್ಕೆ ಮೊದಲಾಗುತ್ತದೆ. ೩೦ ಸಂವತ್ಸರ ತನಕ ಇಳುವರಿ ಕೊಡುತ್ತದೆ. ಒಂದು ವರ್ಷಕ್ಕೆ ೮೦-೧೨೦ ಕಿಲೋಗಳ ಹಣ್ಣು ಬರುತ್ತದೆ. ವಿತ್ತನವು ಆದರೆ ೨೫ಕಿಲೋ ತನಕ ಬರುತ್ತದೆ. ಸಿಪ್ಪೆ ತೆಗೆದ ವಿತ್ತನ/ಬೀಜ()ದಲ್ಲಿದ್ದ ಪದಾರ್ಥಗಳು == ಎಣ್ಣೆ -ಉತ್ಪಾದನೆ == ಸಿಪ್ಪೆಕೂಡಿದ ವಿತ್ತನ /ಗೊರಟೆಯಲ್ಲಿ ಎಣ್ಣೆ ೧೬-೧೮% ವರೆಗೆ ಇರುತ್ತದೆ. ಗೊರಟೆಯಲ್ಲಿದ್ದ ಸಿಪ್ಪೆಯನ್ನು ತೆಗೆದ ಮೇಲೆ ಬೀಜ ೩೦% ತನಕ ಇರುತ್ತದೆ. ಸಿಪ್ಪೆ ತೆಗೆದ ಬೀಜದಲ್ಲಿ ಎಣ್ಣೆ ಪ್ರತಿಶತ ೫೦-೫೨% ವರೆಗೆ ಇರುತ್ತದೆ. ಸಿಪ್ಪೆ/ಹೊಟ್ಟು ತೆಗೆದ ಬೀಜದಿಂದ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ನಲ್ಲಿ ತೆಗೆಯಲಾಗುತ್ತದೆ. ಕಚ್ಚಾಎಣ್ಣೆ ಮಸುಕಾದ ಅರಿಶಿನ ಬಣ್ಣದಲ್ಲಿ ಇರುತ್ತದೆ. ರಿಫೈಂಡ್ ಮಾಡಿದ ಮೇಲೆ ವರ್ಣರಹಿತವಾಗಿರುತ್ತದೆ. ಕಚ್ಚಾ ಎಣ್ಣೆಯಲ್ಲಿ ಸೈಯನೊ ಜನೆಟಿಕ್ ಗ್ಲುಕೊಸೈಡ್( )ಇರುತ್ತದೆ . ಎಣ್ಣೆಯನ್ನು ರಿರ್ಫೈಂಡ್ ಮಾಡಿದ್ದಾಗ ಇದು ಕಳಚಿ ಹೊಗುತ್ತದೆ. ಎಣ್ಣೆಯಲ್ಲಿ ಒಲಿಕ್ ಕೊಬ್ಬಿನ ಆಮ್ಲ ೫೩. ೦-೭೧.೦% ವರೆಗೆ, ಲಿನೊಲಿಕ್ ಆಮ್ಲ ೨೧.೩-೩೫.೬% ತನಕ ಇರುತ್ತವೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦% ವರೆಗೆ ಇರುತ್ತವೆ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ ಎಣ್ಣೆ ಭೌತಿಕ ಧರ್ಮಗಳು === ಎಣ್ಣೆಯ ಪ್ರಯೋಜನಗಳು === ಕಾಂತಿವರ್ಧಕ, ಅಂಗರಾಗ, ಸೌಂದರ್ಯವರ್ಧಕ ಲೇಪನ, ದ್ರವ್ಯಪದಾರ್ಥಗಳನು ತಯಾರಿಸುವುದರಲ್ಲಿ ಉಪಯೋಗಿಸುತ್ತಾರೆ. ಸಲಾಡ್ ಆಹಾರ ಪದಾರ್ಥಗಳನ್ನು ತಯಾರು ಮಾಡಲಾಗುತ್ತದೆ. ಆಸ್ಥ್ಮಾ ನಿವಾರಣಕ್ಕೆ ಉಪಯೋಗಿಸುತ್ತಾರೆ. ಸೊರಯಸಿಸ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. === ಉಲ್ಲೇಖಗಳು ===